Index   ವಚನ - 1    Search  
 
ಆದಿಯಾಧಾರವಿಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು, ವೇದಶಾಸ್ತ್ರಾಗಮ ತರ್ಕತಂತ್ರಗಳಿಲ್ಲದಂದು ಚೌಷಷ್ಠಿ ವಿದ್ಯಾಕಲೆಗಳಿಲ್ಲದಂದು, ಭೇದಾಭೇದಗಳಿಂದೆ ತೋರುವ ತೋರಿಕೆಗಳೇನೂ ಇಲ್ಲದಂದು, ಅಖಂಡೇಶ್ವರಾ, ನಿಮ್ಮ ನೀವರಿಯದೆ ಇರ್ದಿರಂದು.