ಕಾಲಕಲ್ಪಿತಂಗಳಿಲ್ಲದಂದು, ಲೀಲೆ ಇಪ್ಪತ್ತೈದ ನಟಿಸದಂದು,
ಬಾಲಚಂದ್ರನ ಸುಡದಂದು,
ಸಾಲುಮಸ್ತಕಮಾಲೆಯ ಧರಿಸದಂದು,
ಕಾಲ ಕಾಮ ಮಾಯೆ ದಕ್ಷಾದಿಗಳಿಲ್ಲದಂದು,
ಅಖಂಡೇಶ್ವರಾ, ನಿಮ್ಮ ನೀವರಿಯದೆ,
ಅನಂತಕಾಲವಿರ್ದಿರಂದು.
Art
Manuscript
Music
Courtesy:
Transliteration
Kālakalpitaṅgaḷilladandu, līle ippattaida naṭisadandu,
bālacandrana suḍadandu,
sālumastakamāleya dharisadandu,
kāla kāma māye dakṣādigaḷilladandu,
akhaṇḍēśvarā, nim'ma nīvariyade,
anantakālavirdirandu.