Index   ವಚನ - 8    Search  
 
ಬೀಜದ ಮರೆಯಲ್ಲಿ ಅಡಗಿರ್ದ ಅಂಕುರವು, ಬಹಿರ್ಗತವಾದಂತೆ, ಮುಗಿಲಮರೆಯಲ್ಲಿ ಅಡಗಿರ್ದ ಕ್ಷಣಿಕವು ಸ್ಫುರಿಸಿದಂತೆ, ಎನ್ನ ಮನದ ಮಧ್ಯದಲ್ಲಿ ಅಡಗಿರ್ದ ಮಹಾಘನವು ತನ್ನ ಲೀಲೆಯಿಂದೆ ತಾನೇ ಉದಯವಾಗಲು ನಿಮ್ಮ ಆದಿಯನಾದಿಯ ನಿಲವ ಕಂಡೆನಯ್ಯಾ ಅಖಂಡೇಶ್ವರಾ.