Index   ವಚನ - 30    Search  
 
ಸಾಕುಮಾಡದು ಭವಬಂಧನಂಗಳ, ನೂಕಿಬಿಡದು ಸಕಲಸಂಸಾರವ, ಬೇಕೆಂದೆಳಸುವುದು ವಿಷಯಭೋಗಕ್ಕೆ, ಶಿವಶಿವಾ, ಈ ಕಾಕುಮನಕ್ಕೆ ಏನುಮಾಡಲಿ? ಹರಹರಾ, ಈ ಕಳ್ಳಮನಕ್ಕೆ ಎಂತುಮಾಡಲಿ? ಅಖಂಡೇಶ್ವರಾ, ನಿಮ್ಮ ಕೃಪಾವಲೋಕನದಿಂದ ನೋಡಿ ಪಾಲಿಪುದಯ್ಯ ಎನ್ನ, ನಿಮ್ಮ ಧರ್ಮ ನಿಮ್ಮ ಧರ್ಮ.