Index   ವಚನ - 39    Search  
 
ತಂದೆ-ತಾಯಿ, ಬಂಧು-ಬಳಗ, ಹೆಂಡಿರು-ಮಕ್ಕಳು, ತೊತ್ತು-ಬಂಟರುಗಳಿಗೆ ಒಬ್ಬನೆ ಗುರುವು. ಒಂದೇ ದೀಕ್ಷೆಯಾದಡೆ ಅತ್ಯಂತ ಉತ್ತಮ ನೋಡಾ ಪತಿಪತ್ನೀಭ್ರಾತೃಪುತ್ರದಾಸ್ಯೋ ಗೃಹಚರಾಶ್ಚ ಯೇ | ಏಕ ಏವ ಗುರುಸ್ತೇಷಾಂ ದೀಕ್ಷೈಕಾ ತು ವಿಶೇಷ್ಯತೇ ||'' ಇದಲ್ಲದೆ ಬಹುಮುಖದ ಗುರು, ಬಹುಮುಖದ ದೀಕ್ಷೆಯಾದಡೆ, ಅಘೋರನರಕ ತಪ್ಪದಯ್ಯ ಅಖಂಡೇಶ್ವರಾ.