Index   ವಚನ - 41    Search  
 
ಎನ್ನ ಜೀವಭಾವಿಯೆಂದೆನಿಸದೆ ಶಿವಭಾವಿಯೆಂದೆನಿಸಿದ ಗುರುವೆ ನಮೋ ನಮೋ. ಎನ್ನ ಕಾಯಕಲ್ಪಿತವನಳಿದು ಎನ್ನೊಳಗೆ ಮೂಲಮಂತ್ರವ ತೋರಿದ ಗುರುವೇ ನಮೋ ನಮೋ. ಎನ್ನ ತನುತ್ರಯಂಗಳಲ್ಲಿ ಮುಸುಕಿದ ಮಲತ್ರಯಂಗಳ ಕಳೆದು ಲಿಂಗತ್ರಯಂಗಳ ನೆಲೆಗೊಳಿಸಿದ ಗುರುವೇ ನಮೋ ನಮೋ. ಎನ್ನ ಭವಿಜನ್ಮವಳಿದು ಭಕ್ತನಮಾಡಿ ಮುಕ್ತಿಪಥವ ತೋರಿದ ಗುರುವೆ ನಮೋ ನಮೋ. ಅಖಂಡೇಶ್ವರನೆಂಬ ಅನಾದಿ ಮಹಾಗುರುವೆ ನಮೋ ನಮೋ.