Index   ವಚನ - 44    Search  
 
ಕಲ್ಪತರು ಕಾಡಮರನಾಗಬಲ್ಲುದೇನಯ್ಯಾ? ಕಾಮಧೇನು ಕಾಡಪಶುವಾಗಬಲ್ಲುದೇನಯ್ಯಾ? ಸಿಂಹದಮರಿ ಸೀಳ್ ನಾಯಿಯಾಗಬಲ್ಲುದೇನಯ್ಯಾ? ಪರಮ ಶ್ರೀಗುರುವಿನ ಕರಕಮಲದಲ್ಲಿ ಉದಯವಾದ ಮಹಾಶರಣರು ಮರಳಿ ನರರಾಗಬಲ್ಲರೆ ಹೇಳಾ ಅಖಂಡೇಶ್ವರಾ?