Index   ವಚನ - 47    Search  
 
ಸಚ್ಚಿದಾನಂದ ಸದ್ಗುರು ತೋರಿದರೆ ಕಂಡೆನಯ್ಯಾ ಸತ್ಯಸದಾಚಾರವ. ಸಚ್ಚಿದಾನಂದ ಸದ್ಗುರು ತೋರಿದರೆ ಕಂಡೆನಯ್ಯಾ ಭಕ್ತಿ ಜ್ಞಾನ ವೈರಾಗ್ಯವ. ಸಚ್ಚಿದಾನಂದ ಸದ್ಗುರು ತೋರಿದರೆ ಕಂಡೆನಯ್ಯ ನಿತ್ಯಲಿಂಗಾಂಗಸಂಗಸಮರಸವ. ಸಚ್ಚಿದಾನಂದ ಸದ್ಗುರು ತೋರಿಸಿದರೆ ಕಂಡೆನಯ್ಯಾ ಅಖಂಡೇಶ್ವರಾ ನಿಮ್ಮ ಶ್ರೀಚರಣಕಮಲವ.