Index   ವಚನ - 67    Search  
 
ಶಿವಶಿವಾ ಎಂದು ಶಿವನ ನೆನೆದು, ಭವದ ಬೇರ ಕಿತ್ತೊಗೆಯಿರೋ. ಪರಶಿವಮೂರ್ತಿ ಪರಬ್ರಹ್ಮಲಿಂಗವ ಪೂಜಿಸಿ, ಹರಿ ಹತ್ತು ಭವವ ನೀಗಿದ! ಅಜ ಅನಂತಕಲ್ಪವ ಮೀರಿದ, ಸುಜನ ಮುನಿಗಳು ನಿಜಪದವನೈದಿದರು ನೋಡಿರೋ ನಮ್ಮ ಅಖಂಡೇಶ್ವರಲಿಂಗದಲ್ಲಿ!