ಎನ್ನ ತನು ಎನ್ನ ಧನ ಎನ್ನ ಮನೆ,
ಎನ್ನ ಸತಿ ಸುತರೆಂಬ ಮನಕ್ಕೆ
ಈಶ್ವರಭಕ್ತಿ ಭಿನ್ನವಾಯಿತ್ತು ನೋಡಾ!
ತನ್ನಮರೆದು ಇದಿರನರಿದು
ಒಡವೆಯಾತಂಗೆ ಒಡವೆಯ ಒಪ್ಪಿಸಿದೆಯಾದರೆ
ಕೂಡಿಕೊಂಡಿರ್ಪನು ನೋಡಾ ನಮ್ಮ ಅಖಂಡೇಶ್ವರನು.
Art
Manuscript
Music
Courtesy:
Transliteration
Enna tanu enna dhana enna mane,
enna sati sutaremba manakke
īśvarabhakti bhinnavāyittu nōḍā!
Tannamaredu idiranaridu
oḍaveyātaṅge oḍaveya oppisideyādare
kūḍikoṇḍirpanu nōḍā nam'ma akhaṇḍēśvaranu.