ಧರ್ಮಾರ್ಥವಾಗಿ ದೀಕ್ಷೆಯ ಮಾಡಬೇಕಲ್ಲದೆ,
ಆಶಾರ್ಥವಾಗಿ ದೀಕ್ಷೆಯ ಮಾಡಲಾಗದಯ್ಯ.
ಜ್ಞಾನಾರ್ಥವಾಗಿ ಶಾಸ್ತ್ರವನೋದಬೇಕಲ್ಲದೆ,
ವಾದಾರ್ಥವಾಗಿ ಶಾಸ್ತ್ರವನೋದಲಾಗದಯ್ಯ.
ಮೋಕ್ಷಾರ್ಥವಾಗಿ ಶಿವಪೂಜೆಯ ಮಾಡಬೇಕಲ್ಲದೆ,
ಡಂಭಾರ್ಥವಾಗಿ ಶಿವಪೂಜೆಯ ಮಾಡಲಾಗದಯ್ಯ.
ಅದೆಂತೆಂದೊಡೆ:
ಆಶಾರ್ಥಂ ದೀಯತೇ ದೀಕ್ಷಾ ದಂಭಾರ್ಥಂ ಪೂಜ್ಯತೇ ಶಿವಃ |
ವಾದಾರ್ಥಂ ಪಠ್ಯತೇ ವಿದ್ಯಾ ಮೋಕ್ಷೋ ನಾಸ್ತಿ ವರಾನನೇ ||
ಧರ್ಮಾರ್ಥಂ ದೀಯತೇ ದೀಕ್ಷಾ ಮೋಕ್ಷಾರ್ಥಂ ಪೂಜ್ಯತೇ ಶಿವಃ |
ಜ್ಞಾನಾರ್ಥಂ ಪಠ್ಯತೇ ವಿದ್ಯಾ ಮೋಕ್ಷಸಿದ್ಧಿರ್ವರಾನನೇ ||''
ಎಂದುದಾಗಿ, ಇಂತಪ್ಪ ಖ್ಯಾತಿ ಕೀರ್ತಿಯ ಕಡೆಗೆ ನೂಂಕಿ
ನೀತಿಯ ನಿಜವನು ಅಂಗೀಕರಿಸಿ
ಶಿವನನೊಲಿಸುವ ಭಾವವನರಿಯದೆ
ಸಂತೆಯ ಪಸಾರದಂತೆ ಸರ್ವರು ಮೆಚ್ಚಲೆಂದು ಹಾರೈಸಿ
ಹರಹಿಕೊಂಡು ಮಾಡುವ ಡಂಭಕನ ಪೂಜೆ
ಶಂಭುವಿಂಗೆ ಮುಟ್ಟಲರಿಯದು
ನೋಡಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Dharmārthavāgi dīkṣeya māḍabēkallade,
āśārthavāgi dīkṣeya māḍalāgadayya.
Jñānārthavāgi śāstravanōdabēkallade,
vādārthavāgi śāstravanōdalāgadayya.
Mōkṣārthavāgi śivapūjeya māḍabēkallade,
ḍambhārthavāgi śivapūjeya māḍalāgadayya.
Adentendoḍe:
Āśārthaṁ dīyatē dīkṣā dambhārthaṁ pūjyatē śivaḥ |
vādārthaṁ paṭhyatē vidyā mōkṣō nāsti varānanē ||
dharmārthaṁ dīyatē dīkṣā mōkṣārthaṁ pūjyatē śivaḥ |
jñānārthaṁ paṭhyatē vidyā mōkṣasid'dhirvarānanē ||''
Endudāgi, intappa khyāti kīrtiya kaḍege nūṅki
nītiya nijavanu aṅgīkarisi
śivananolisuva bhāvavanariyade
santeya pasāradante sarvaru meccalendu hāraisi
harahikoṇḍu māḍuva ḍambhakana pūje
śambhuviṅge muṭṭalariyadu
nōḍā akhaṇḍēśvarā.