Index   ವಚನ - 153    Search  
 
ಲಿಂಗಪೂಜಕನಾದಡೆ ಜಂಗಮವನರ್ಚಿಸಬೇಕು. ಲಿಂಗನಿಷ್ಠಾಪರನಾದಡೆ ಜಂಗಮದಲ್ಲಿ ವಿಶ್ವಾಸವನಿಡಬೇಕು. ಲಿಂಗವ ಪೂಜಿಸಿ ಜಂಗಮವ ಮರೆತಡೆ ಶಿರವಿಲ್ಲದ ದೇಹದಂತೆ ಕಾಣಾ ಅಖಂಡೇಶ್ವರಾ.