Index   ವಚನ - 157    Search  
 
ಗುರುವಿನಲ್ಲಿ ಭಕ್ತಿಯಿಲ್ಲ, ಲಿಂಗದಲ್ಲಿ ನಿಷ್ಠೆಯಿಲ್ಲ, ಜಂಗಮದಲ್ಲಿ ವಿಶ್ವಾಸವಿಲ್ಲ, ಪಾದೋದಕ ಪ್ರಸಾದದಲ್ಲಿ ಪ್ರೇಮವಿಲ್ಲ. ಬರಿದೆ ಭಕ್ತರೆಂಬ ಭವಭಾರಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.