ಹರಹರಾ, ಎನ್ನ ಬಡಮನದ ಅಳಿಯಾಸೆಯ ನೋಡಾ!
ಸುರಧೇನುವಿದ್ದು ಬರಡಾಕಳಿಗೆ ಆಸೆಮಾಡುವಂತೆ,
ಕಲ್ಪವೃಕ್ಷವಿದ್ದು ಕಾಡಮರಕ್ಕೆ ಕೈಯಾನುವಂತೆ,
ಚಿಂತಾಮಣಿಯಿದ್ದು ಗಾಜಿನಮಣಿಯ ಬಯಸುವಂತೆ,
ಎನ್ನ ಕರ ಮನ ಭಾವದಲ್ಲಿ ನೀವು ಭರಿತರಾಗಿರ್ದುದ
ಮರೆತು ನರರಿಗಾಸೆಯ ಮಾಡಿ
ಕೆಟ್ಟೆನಯ್ಯ ಅಖಂಡೇಶ್ವರಾ.
Art
Manuscript
Music
Courtesy:
Transliteration
Haraharā, enna baḍamanada aḷiyāseya nōḍā!
Suradhēnuviddu baraḍākaḷige āsemāḍuvante,
kalpavr̥kṣaviddu kāḍamarakke kaiyānuvante,
cintāmaṇiyiddu gājinamaṇiya bayasuvante,
enna kara mana bhāvadalli nīvu bharitarāgirduda
maretu nararigāseya māḍi
keṭṭenayya akhaṇḍēśvarā.