Index   ವಚನ - 203    Search  
 
ಮಾಡುವ ಭಕ್ತ ನೀನೆಯೆಂದರಿದೆ; ಮಾಡಿಸಿಕೊಂಬ ದೇವ ನೀನೆಯೆಂದರಿದೆ. ಇದು ಕಾರಣ, ಅಖಂಡೇಶ್ವರಾ, ನಾ ನಿಮ್ಮ ಫಲಪದವ ಬೇಡಲಿಲ್ಲ; ನೀವೊಲಿದು ಎನಗೆ ಕೊಡಲಿಲ್ಲ.