Index   ವಚನ - 211    Search  
 
ನೈಷ್ಠೆಯೆಂಬುದು ತನುವಿನ ಪ್ರಕೃತಿಯ ಕೆಡಿಸುವುದು. ನೈಷ್ಠೆಯೆಂಬುದು ಮನದ ಮಾಯವನಳಿವುದು. ನೈಷ್ಠೆಯೆಂಬುದು ಜ್ಞಾನದ ಬಟ್ಟೆಯ ತೋರುವುದು. ನೈಷ್ಠೆಯೆಂಬುದು ಅಖಂಡೇಶ್ವರಲಿಂಗವನೊಲಿಸುವುದು.