Index   ವಚನ - 223    Search  
 
ಮನದಲ್ಲಿ ಆಸೆ ಮೊಳೆದೋರಿ ಮತ್ತೆ ಮತ್ತೆ ಬೇಕೆಂಬಲ್ಲಿ ಎನ್ನ ಮನ ಕಿರಿದಾಯಿತ್ತು. ನುಡಿಯಲ್ಲಿ ಉಪಾಧಿಕೆ ಮೊಳೆದೋರಿ ಸರ್ವರನು ಕೊಡು ಕೊಡು ಎಂದು ಬೇಡಿದಲ್ಲಿ ಎನ್ನ ನುಡಿ ಕಿರಿದಾಯಿತ್ತು. ಲಿಂಗದ ನೆನಹ ಜಂಗಮದ ಸೇವೆಯ- ತೊರೆದು ಅಂಗವಿಕಾರಕ್ಕೆ ಹರಿದಲ್ಲಿ ಎನ್ನ ನಡೆ ಕಿರಿದಾಯಿತ್ತು. ಇಂತೀ ತ್ರಿಕರಣಶುದ್ಧವಿಲ್ಲದೆ ಅಬದ್ಧ ಪಾಪಿ ಚಾಂಡಾಲ ದ್ರೋಹಿಗೆ ಅಖಂಡೇಶ್ವರನು ಎಂತೊಲಿವನೊ ಎನಗೆ?