Index   ವಚನ - 231    Search  
 
ಮಾತಿನಲ್ಲಿ ಕರ್ಕಶ, ಮನದಲ್ಲಿ ಘಾತಕತನವುಳ್ಳವನ ಕನಿಷ್ಠನೆಂಬರು. ಮಾತಿನಲ್ಲಿ ಎಲ್ಲೆ, ಮನದಲ್ಲಿ ಕತ್ತರಿಯುಳ್ಳವನ ಮಧ್ಯಮನೆಂಬರು. ಮಾತಿನಲ್ಲಿ ಮೃದು, ಮನದಲ್ಲಿ ಪ್ರೀತಿಯುಳ್ಳವನ ಉತ್ತಮನೆಂಬರು ನೋಡಾ ಜಗದವರು. ಮಾತಿನಲ್ಲಿ ಮಂತ್ರ ಮನದಲ್ಲಿ ಮಹಾನುಭಾವ ಆತ್ಮದಲ್ಲಿ ಜ್ಯೋತಿಯ ಬೆಳಗುತಿಪ್ಪನಾಗಿ ಉತ್ತಮನಲ್ಲ ಮಧ್ಯಮನಲ್ಲ ಕನಿಷ್ಠನಲ್ಲ ನೋಡಾ, ಅಖಂಡೇಶ್ವರಾ ನಿಮ್ಮ ಶರಣನು.