Index   ವಚನ - 244    Search  
 
ಘನತರದಿಷ್ಟಲಿಂಗದಲ್ಲಿ ಅನಿಮಿಷದೃಷ್ಟಿ ಬಲಿದು, ಮನ ಕರಗಿ, ತನು ಉಬ್ಬಿ, ಹೃದಯಕಮಲ ಪಸರಿಸಿ, ಸರ್ವಾಂಗವು ಗುಡಿಗಟ್ಟಿ ಕಂಗಳಲ್ಲಿ ಪರಿಣಾಮಜಲ ಉಕ್ಕಿ ಹೊರಸೂಸುತ್ತ, ಪರಮಕಾಷ್ಠೆಯಂತೆ ಚಿತ್ರದ ರೂಹಿನಂತೆ ಪರಬ್ರಹ್ಮಲಿಂಗದಲ್ಲಿ ಬೆರೆದು ಪರವಶಗೊಂಡಿರ್ಪ ಮಹಾಶರಣರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.