Index   ವಚನ - 246    Search  
 
ನಿಮ್ಮ ನೋಡಿ ನೋಡಿ ಎನ್ನ ಕಂಗಳು ದಣಿಯವಯ್ಯ. ನಿಮ್ಮ ಹಾಡಿ ಹಾಡಿ ಎನ್ನ ಜಿಹ್ವೆ ದಣಿಯದಯ್ಯ. ನಿಮ್ಮ ಪೂಜೆಯ ಮಾಡಿ ಮಾಡಿ ಎನ್ನ ಕೈಗಳು ದಣಿಯವಯ್ಯ. ನಿಮ್ಮ ನೆನೆನೆನೆದು ಎನ್ನ ಮನವು ದಣಿಯದಯ್ಯ ಅಖಂಡೇಶ್ವರಾ.