Index   ವಚನ - 273    Search  
 
ಬ್ರಹ್ಮ ದೇವನಾದಡೆ ಹಮ್ಮಿನಿಂದ ಹೋದ ತಲೆಯ ಗಮ್ಮನೆ ಪಡೆಯಲರಿಯನೇತಕೊ? ವಿಷ್ಣು ದೇವನಾದಡೆ ಸುಟ್ಟು ಹೋದ ಮನ್ಮಥನ ಪ್ರಾಣವ ನೆಟ್ಟನೆ ಕೊಡಲರಿಯನೇತಕೊ? ಇದನರಿಯದೆ, ಹುಟ್ಟಿಸುವಾತ ಬ್ರಹ್ಮ ರಕ್ಷಿಸುವಾತ ವಿಷ್ಣುವೆಂದು ನುಡಿವ, ಭ್ರಷ್ಟ ವಿಪ್ರರೆಂಬ ಹೊಲೆಮನದ ಹಾರುವರ ಮೆಟ್ಟಿ ಮೆಟ್ಟಿ ತುಳಿತುಳಿದು ಹೊಟ್ಟೆ ಹರಿಯಲೊದೆಯೆಂದಾತ ನಮ್ಮ ಅಖಂಡೇಶ್ವರನು.