ಹರಿ ಹರಗೆ ಸರಿಯೆಂಬ
ಎಲೆ ನೀಚ ಪರವಾದಿಗಳಿರಾ ನೀವು ಕೇಳಿರೊ.
ಹರಿ ಹತ್ತು ಭವದಲ್ಲಿ ಹುಟ್ಟಿ ಬಂದು
ನಮ್ಮ ಹರನ ಶ್ರೀಚರಣವನರ್ಚಿಸಿ ವರವ ಪಡೆದನಲ್ಲದೆ
ನಮ್ಮ ಹರನು ಆವ ಭವದಲ್ಲಿ ಹುಟ್ಟಿದ?
ಆವ ದೇವರ ಪೂಜಿಸಿ ಆವ ಆವ ಫಲಪದವ ಪಡೆದನು
ಬಲ್ಲರೆ ನೀವು ಹೇಳಿರೊ?
ಇದನರಿಯದೆ ಹರಿ ಹರಗೆ ಸರಿಯೆಂಬ
ಪರವಾದಿಗಳ ಬಾಯ ಕೆರಹಿನಟ್ಟೆಯಲ್ಲಿ ಹೊಯ್ದಲ್ಲದೆ
ಎನ್ನ ಸಿಟ್ಟು ಮಾಣದು ನೋಡಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Hari harage sariyemba
ele nīca paravādigaḷirā nīvu kēḷiro.
Hari hattu bhavadalli huṭṭi bandu
nam'ma harana śrīcaraṇavanarcisi varava paḍedanallade
nam'ma haranu āva bhavadalli huṭṭida?
Āva dēvara pūjisi āva āva phalapadava paḍedanu
ballare nīvu hēḷiro?
Idanariyade hari harage sariyemba
paravādigaḷa bāya kerahinaṭṭeyalli hoydallade
enna siṭṭu māṇadu nōḍā akhaṇḍēśvarā.