Index   ವಚನ - 285    Search  
 
ದರ್ಪಣದೊಳಗಣ ರೂಹಿಗೆ ಚೇಷ್ಟಾಭಾವ ಉಂಟೆಂದಡೆ ನೋಡುವಾತನ ಚೇತನದಿಂದಲ್ಲದೆ, ಅದಕ್ಕೆ ಬೇರೆ ಚೇತನ ಉಂಟೆ ಅಯ್ಯ? ಎನ್ನ ಕರಣೇಂದ್ರಿಯಂಗಳು ಚೇಷ್ಟಿಸಿದುವೆಂದಡೆ, ನಿಮ್ಮ ಚೇತನದಿಂದಲ್ಲದೆ ಅವಕೆ ಬೇರೆ ಚೇತನ ಉಂಟೆ ಅಯ್ಯ? ಸೂತ್ರದ ಬೊಂಬೆಯಂತೆ ನೀನಾಡಿಸಿದಂತೆ ನಾನಾಡುತಿರ್ದೆನಯ್ಯ ಅಖಂಡೇಶ್ವರಾ.