Index   ವಚನ - 292    Search  
 
ಸ್ಥಾವರವು ಜಂಗಮವು ಒಂದೆ ಎಂಬಿರಿ, ಮಂದಮತಿ ಮಾನವರಿರಾ, ನೀವು ಕೇಳಿರೋ! ಸ್ಥಾವರವು ನಿಃಶಬ್ದಮಯವು, ಜಂಗಮವು ಮಂತ್ರಶಬ್ದಮಯವು. ಸ್ಥಾವರವು ಅಚೇತನವು, ಜಂಗಮವು ಚೇತನಸ್ವರೂಪವು. ಎಂದು ಮಾಡಿದ ಭಕ್ತಿಗೆ ಒಲಿದು, ನೀಡಿದ ಪದಾರ್ಥವ ಕೈಕೊಂಡು ಮುಕ್ತಿಯ ಕೊಡುವ ಮಹಾ ಘನಜಂಗಮವ ಅಧಿಕವೆಂದರಿಯದೆ, ಬರಿದೆ ಸ್ಥಾವರ ಘನವೆಂಬ ಬಿನುಗುಜೀವರನೇನೆಂಬೆನಯ್ಯ ಅಖಂಡೇಶ್ವರಾ?