Index   ವಚನ - 311    Search  
 
ಅಲ್ಲದುದ ಹಿಡಿವನಲ್ಲ ಶರಣ. ಇಲ್ಲದುದ ನುಡಿವನಲ್ಲ ಶರಣ. ಗೆಲ್ಲ ಸೋಲಿಂಗೆ ಹೋರುವವನಲ್ಲ ಶರಣ. ಬಲ್ಲೆನೆಂದು ತನ್ನ ಬಲ್ಲತನವ ಎಲ್ಲರೊಳು ಬೀರುವನಲ್ಲವಯ್ಯ ಅಖಂಡೇಶ್ವರಾ ನಿಮ್ಮ ಶರಣ.