Index   ವಚನ - 333    Search  
 
ಜಂಗಮಲಿಂಗವೇ ನಮೋ ನಮೋ. ಜಂಗಮವ ನಿರ್ಮಿಸಿದ ಪರಮಜಂಗಮಲಿಂಗವೆ ನಮೋ ನಮೋ. ಜಗದ ಪ್ರಪಂಚುವನು ಹೊದ್ದದ ಪರಮಜಂಗಮಲಿಂಗವೆ ನಮೋ ನಮೋ. ಜಗವ ಪಾವನಮಾಡುವ ಪರಮಜಂಗಮಲಿಂಗವೆ ನಮೋ ನಮೋ. ಜಗದಾರಾಧ್ಯನಾದ ಪರಮಜಂಗಮಲಿಂಗವೆ ನಮೋ ನಮೋ. ಅಗಮ್ಯ ಅಗೋಚರ ಅಪ್ರಮಾಣನಾದ ಅಖಂಡೇಶ್ವರನೆಂಬ ಅನಾದಿ ಪರಮಜಂಗಮಲಿಂಗವೇ ನಮೋ ನಮೋ.