Index   ವಚನ - 335    Search  
 
ಶಿವ ಶಿವಾ, ನೀ ನಡೆಸಿದಂತೆ ನಡೆವೆ. ಶಿವ ಶಿವಾ, ನೀ ನುಡಿಸಿದಂತೆ ನುಡಿವೆ. ನಿಮ್ಮ ಊಳಿಗವ ಮಾಡುವೆ. ನೀವಿರಿಸಿದಲ್ಲಿ ಇರುವೆನಯ್ಯ ಅಖಂಡೇಶ್ವರಾ.