Index   ವಚನ - 391    Search  
 
ಜಂಗಮ ಜಂಗಮವೆಂದು ನುಡಿಯುತಿರ್ಪರೆಲ್ಲರು, ಜಂಗಮದ ಘನವನಾರು ಅರಿಯರಲ್ಲ. ಜಂಗಮವೆಂದಡೆ ನಿರ್ನಾಮ ನಿರ್ದೇಹಿ; ಜಂಗಮವೆಂದಡೆ ನಿರ್ಜಡ ನಿರಾವರಣ; ಜಂಗಮವೆಂದಡೆ ನಿಃಸೀಮ ನಿರ್ಜಾತ; ಜಂಗಮವೆಂದಡೆ ನಿರುಪಮ ನಿರ್ಭೇದ್ಯ; ಜಂಗಮವೆಂದಡೆ ನಿರಾಳ ನಿರಾಲಂಬ; ಜಂಗಮವೆಂದಡೆ ನಿರಂಜನ ನಿರ್ವಯಲು. ಇಂತಪ್ಪ ಸಚ್ಚಿದಾನಂದ ನಿತ್ಯಪರಿಪೂರ್ಣ ಜಂಗಮದ ಪರಮಪ್ರಸಾದವ ಕೊಂಡು ಎನ್ನ ಪ್ರಾಣದ ತೊಡಕ ಹರಿದೆನಯ್ಯ ಅಖಂಡೇಶ್ವರಾ.