Index   ವಚನ - 393    Search  
 
ಹರಿವಿರಂಚಿಗಳಿಗೆ ನಿಲುಕದ ಪರಬ್ರಹ್ಮಪ್ರಸಾದ. ನರ ಸುರ ಯಕ್ಷ ರಾಕ್ಷಸರಿಗೆ ಸಿಲುಕದ ತ್ರಿಯಕ್ಷಪ್ರಸಾದ. ಮನುಮುನಿಗಳಿಗೆ ಒಲಿಯದ ಮಹಾಪ್ರಸಾದ. ಅಖಂಡೇಶ್ವರನ ಘನಗಂಭೀರ ಪ್ರಸಾದ ಎನಗೊದಗಿತ್ತು ನೋಡಾ.