Index   ವಚನ - 396    Search  
 
ಒಮ್ಮೆ ನೀ ದೇವನಾದಲ್ಲಿ ನಾ ಭಕ್ತನಾಗಿರ್ಪೆನು. ಮತ್ತೊಮ್ಮೆ ನಾ ದೇವನಾದಲ್ಲಿ ನೀವು ಭಕ್ತರಾಗಿರ್ಪಿರಿ. ಅದೆಂತೆಂದೊಡೆ: ಎನ್ನ ತನು ಮನ ಪ್ರಾಣೇಂದ್ರಿಯಂಗಳು ನಿಮಗರ್ಪಿತವಾದವು. ನಿಮ್ಮ ಮಹಾಪ್ರಸಾದವೆನ್ನೊಳಗಾಯಿತ್ತಾಗಿ ಅಖಂಡೇಶ್ವರಾ, ನೀವೇ ಪದಾರ್ಥ ನಾನೇ ಪ್ರಸಾದವಯ್ಯಾ.