ವಚನ - 1155     
 
ಗುರುವ ನೆನೆದೆಹೆನೆಂದು ನೆನೆಯುತ್ತಿದ್ದಡೆ ನೆನೆವ ಮನವು ತಾನು ಗುರುವಾಯಿತು ನೋಡಾ. ಆಹಾ! ಮಹಾದೇವ, ಇನ್ನಾವುದರಿಂದ? ಆವುದನು? ಏನೆಂದು ನೆನೆವೆ? ಮನವೆ ಗುರುವಾದ ಕಾರಣ, ಮನವೆ ಗುರುವಾಗಿ ನೆನಹನಿಂಬುಗೊಂಡನು ಗುಹೇಶ್ವರಲಿಂಗ ಚೋದ್ಯಚರಿತ್ರನು!