Index   ವಚನ - 399    Search  
 
ಪ್ರಸಾದಿಯಾದಡೆ ಚೇಳಿಯಕ್ಕನಂತಿರಬೇಕು. ಪ್ರಸಾದಿಯಾದಡೆ ಮಾದಾರ ಚೆನ್ನಯ್ಯನಂತಿರಬೇಕು. ಪ್ರಸಾದಿಯಾದಡೆ ಬೇಡರ ಕಣ್ಣಪ್ಪನಂತಿರಬೇಕು. ಪ್ರಸಾದಿಯಾದಡೆ ಬಿಬ್ಬಿ ಬಾಚಯ್ಯಗಳಂತಿರಬೇಕು. ಪ್ರಸಾದಿಯಾದಡೆ ಡೋಹರ ಕಕ್ಕಯ್ಯನಂತಿರಬೇಕು. ಪ್ರಸಾದಿಯಾದಡೆ ಪರಮಗುರು ಚೆನ್ನಬಸವಣ್ಣನಂತಿರಬೇಕು. ಅಲ್ಲದೆ ಪ್ರಾಣನ ಹಸಿವೆಗೆಂದು ಬಾಯಿಗೆ ಬಂದಂತೆ ತಿಂಬ ಜೀವಗಳ್ಳರಿಗೆಲ್ಲಿಯ ಪ್ರಸಾದವಯ್ಯಾ ಅಖಂಡೇಶ್ವರಾ?