ವಚನ - 1157     
 
ಗುರುವಿಡಿದ ಅರಿವು ಅರಿವಲ್ಲ, ಲಿಂಗವಿಡಿದ ಅರಿವು ಅರಿವಲ್ಲ. ಇಲ್ಲದ ಗುರು ಇಲ್ಲದ ಲಿಂಗ! ಕಲ್ಪಿತಕ್ಕೆ ಅರಿವಹುದೆ? ತನ್ನಿಂದ ತಾನರಿವುದೆ ಅರಿವು ಗುಹೇಶ್ವರಾ.