ಗುರುವಿದು ಲಿಂಗವಿದು ಜಂಗಮವಿದು ಎಂಬ ಭೇದವ
ಏಕವ ಮಾಡಿ ನಿನಗೆ ತೋರಿದವರಾರು ಹೇಳಾ?
ಆದಿ ಅನಾದಿಯನು ಒಂದು ಮಾಡುವ,
ಭಾವ ನಿರ್ಭಾವವನು ಅರುಹಿದವರಾರು ಹೇಳಾ?
ದೀಕ್ಷೆ ಶಿಕ್ಷೆ ಸ್ವಾನುಭಾವದ ಪರಿಯ ತೋರಿ
ನಿಜಪದದಲ್ಲಿ ನಿಲಿಸಿದವರಾರು ಹೇಳಾ?
ಗುಹೇಶ್ವರಲಿಂಗದಲ್ಲಿ
ನಿನ್ನ ಆಯತವ ಹೇಳಾ ಮಡಿವಾಳ ಮಾಚಯ್ಯಾ?
Transliteration Guruvidu liṅgavidu jaṅgamavidu emba bhēdava
ēkava māḍi ninage tōridavarāru hēḷā?
Ādi anādiyanu ondu māḍuva,
bhāva nirbhāvavanu aruhidavarāru hēḷā?
Dīkṣe śikṣe svānubhāvada pariya tōri
nijapadadalli nilisidavarāru hēḷā?
Guhēśvaraliṅgadalli
ninna āyatava hēḷā maḍivāḷa mācayyā?
Hindi Translation यह गुरु, यह लिंग, यह जंगम ऐसे भेद को
एक बनाए तुझे दिखाया किसने कहो?
आदि अनादि को एक करना,
भाव निर्भाव को समझाया किसने कहो?
दीक्षा शिक्षा स्वानुभाव की रीति दिखाये,
निजपद में खड़ा किया किसने कहो ?
गुद्देश्वर लिंग में
तेरा स्थान कह मडिवाळ माचय्या?
Translated by: Eswara Sharma M and Govindarao B N