Index   ವಚನ - 421    Search  
 
ಎನ್ನ ಘ್ರಾಣದ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ಜಿಹ್ವೆಯ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ನೇತ್ರದ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ತ್ವಕ್ಕಿನ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ಶ್ರೋತ್ರದ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ಹೃದಯದ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ಸರ್ವಾಂಗದಪರಿಣಾಮ ನಿಮಗರ್ಪಿತವಯ್ಯಾ ಅಖಂಡೇಶ್ವರಾ.