ಎನ್ನ ತನು ಅಡಗುವುದಕ್ಕೆ
ನಿಮ್ಮ ಪ್ರಸಾದವೆ ಆಶ್ರಯವಾಗಿರ್ಪುದು.
ಎನ್ನ ಮನ ಅಡಗುವುದಕ್ಕೆ
ನಿಮ್ಮ ಪ್ರಸಾದವೇ ಆಶ್ರಯವಾಗಿರ್ಪುದು.
ಎನ್ನ ಕರಣೇಂದ್ರಿಯ ಸಕಲ ಅವಯವಗಳು ಅಡಗುವುದಕ್ಕೆ
ನಿಮ್ಮ ಪ್ರಸಾದವೇ ಆಶ್ರಯವಾಗಿರ್ಪುದು.
ಇದು ಕಾರಣ ಅಖಂಡೇಶ್ವರಾ,
ನಿಮ್ಮ ಪ್ರಸಾದದಲ್ಲಿ ಹುಟ್ಟಿ ನಿಮ್ಮ ಪ್ರಸಾದದಲ್ಲಿ ಬೆಳೆದು
ನಿಮ್ಮ ಪ್ರಸಾದದಲ್ಲಿ ಅಡಗುತಿರ್ಪೆನಾಗಿ
ನಿಮ್ಮ ಪ್ರಸಾದವೆನಗೆ ಪ್ರಾಣವಾಗಿರ್ಪುದಯ್ಯಾ.