Index   ವಚನ - 438    Search  
 
ವೇದ ಶಾಸ್ತ್ರ ಆಗಮ ಪುರಾಣ ತರ್ಕ ವ್ಯಾಕರಣ ಇತಿಹಾಸಂಗಳ ಓದಿ ಕೇಳಿ ಹೇಳುವಾತ ಜಾಣನೆ? ಅಲ್ಲಲ್ಲ. ಜಾತಿಗೊಂದು ಮಾತು ಕಲಿತು ಸರ್ವರಿಗೆ ನೀತಿ ಹೇಳುವಾತ ಜಾಣನೇ? ಅಲ್ಲಲ್ಲ. ಮತ್ತಾರು ಜಾಣರೆಂದಡೆ: ಮತ್ತಮತಿಯೆಂಬ ಕತ್ತಲೆಯ ಕಳೆದು, ತಥ್ಯಮಿಥ್ಯ ರಾಗದ್ವೇಷವನಳಿದು ನಿತ್ಯ ಲಿಂಗದಲ್ಲಿ ಚಿತ್ತವಡಗಿರ್ಪ ಚಿನ್ಮಯಶರಣನೇ ಜಾಣನಯ್ಯಾ ಅಖಂಡೇಶ್ವರಾ.