Index   ವಚನ - 440    Search  
 
ವೇದಂಗಳು ನಿಮ್ಮ ಭೇದಿಸಿ ಕಂಡಿಹೆವೆಂದು ಕಾಣಲರಿಯದೆ ಬಳಲಿಬೆಂಡಾಗಿ ಹೋದುವು. ಶಾಸ್ತ್ರಂಗಳು ನಿಮ್ಮ ಸಾಧಿಸಿ ಕಂಡಿಹೆವೆಂದು ಕಾಣಲರಿಯದೆ ಸಂದೇಹಕ್ಕೊಳಗಾಗಿ ಹೋದುವು. ಆಗಮಂಗಳು ನಿಮ್ಮನರಿದು ಕಂಡಿಹೆವೆಂದು ಕಾಣಲರಿಯದೆ ಮೂಗರಾಗಿ ಹೋದುವು. ಇಂತೀ ವೇದ ಶಾಸ್ತ್ರ ಆಗಮಂಗಳನೋದಿ ನಿಮ್ಮ ಕಂಡಿಹೆನೆಂಬವರೆಲ್ಲ ಇನ್ನೆಂತು ಕಾಂಬುವರಯ್ಯಾ ಅಖಂಡೇಶ್ವರಾ?