Index   ವಚನ - 442    Search  
 
ಇದಿರ ಹಳಿದು ತನ್ನ ಬಣ್ಣಿಸುವನ್ನಕ್ಕರ ಶಿವಜ್ಞಾನಿ ಎಂತಪ್ಪನಯ್ಯಾ? ಹಮ್ಮು ಬಿಮ್ಮು ಹೆಮ್ಮೆ ಹಿರಿತನವುಳ್ಳನ್ನಕ್ಕರ ಶಿವಜ್ಞಾನಿ ಎಂತಪ್ಪನಯ್ಯಾ? ಉದಮದ ಗರ್ವ ಅಹಂಕಾರ ಮಮಕಾರವುಳ್ಳನ್ನಕ್ಕರ ಶಿವಜ್ಞಾನಿ ಎಂತಪ್ಪನಯ್ಯಾ? ಆಸೆ ಆಮಿಷ ಕ್ಲೇಶ ತಾಮಸವುಳ್ಳನ್ನಕ್ಕರ ಶಿವಜ್ಞಾನಿ ಎಂತಪ್ಪನಯ್ಯಾ? ಇಂತೀ ಗುಣಂಗಳುಳ್ಳನ್ನಕ್ಕರ ಶಿವಾನುಭಾವಿಯೆಂತಪ್ಪನಯ್ಯಾ ಅಖಂಡೇಶ್ವರಾ?