ಪಶ್ಚಿಮದ ಗಿರಿಯಲ್ಲಿ ಚಿತ್‍ಸೂರ್ಯನುದಯವಾದುದ ಕಂಡೆ.
ಸುತ್ತಿಮುತ್ತಿದ ಕತ್ತಲೆಯೆಲ್ಲ ಅತ್ತಿತ್ತ ಹರಿದು ಹೋದುದ ಕಂಡೆ.
ಹತ್ತು ದಿಕ್ಕಿನ ಒಳಹೊರಗೆಲ್ಲ ಬೆಳಗಿನ
ಮೊತ್ತವೇ ತುಂಬಿದುದ ಕಂಡೆ.
ಮುಚ್ಚಿದ ಕಮಲಂಗಳೆಲ್ಲ ಬಿಚ್ಚಿ ಅರಳಾಗಿ
ಹೊಚ್ಚ ಹೊಸ ಗಂಧ ದೆಸೆದೆಸೆಗೆ ಎಸೆದುದ ಕಂಡೆ.
ಇಂತಿದರ ಕುಶಲವ ಕಂಡು ಬೆರಗಾದೆನಯ್ಯಾ
ಅಖಂಡೇಶ್ವರಾ.