Index   ವಚನ - 463    Search  
 
ಕಡಲಮಧ್ಯದಲ್ಲಿ ವಡವಾಗ್ನಿ ಹುಟ್ಟಿ, ಆ ಕಡಲ ಸುಡುವುದ ಕಂಡೆ. ನಡುರಂಗದ ಜ್ಯೋತಿ ಸೊಡರಳಿದು ಎಡಬಲದಲ್ಲಿ ಕುಡಿವರಿದು ಬೆಳಗುತಿರ್ಪುದ ಕಂಡೆನಯ್ಯಾ ಅಖಂಡೇಶ್ವರಾ.