Index   ವಚನ - 495    Search  
 
ಇನ್ನು ಸಮಾಧಿಯೋಗವೆಂತೆಂದೊಡೆ: ಸುಖದುಃಖ ಪುಣ್ಯಪಾಪ ಪೂಜಾಪೂಜಂಗಳು ಸಂಕಲ್ಪವಿಕಲ್ಪಂಗಳೇನೂ ತೋರದೆ, ತಾನೆಂಬ ಅಹಂಭಾವವಳಿದು ಅಖಂಡಪರಿಪೂರ್ಣಮಾದ ಪರಬ್ರಹ್ಮದಲ್ಲಿ ಕೂಡಿದ ಸಮರಸಭಾವವೇ ಸಮಾಧಿಯಯ್ಯಾ ಅಖಂಡೇಶ್ವರಾ.