Index   ವಚನ - 517    Search  
 
ಅಯ್ಯಾ, ನಿಮ್ಮನೆನ್ನ ಕರಸ್ಥಲದಲ್ಲಿ ನೋಡಿದಡೆ ನೀವೆನ್ನ ಕಂಗಳ ಕೊನೆಯಲ್ಲಿ ತೋರುತಿರ್ಪಿರಿ: ಇದೇನು ನಿಮ್ಮ ಗಾರುಡವಯ್ಯಾ! ಅಯ್ಯಾ, ನಿಮ್ಮನೆನ್ನ ಕಂಗಳ ಕೊನೆಯಲ್ಲಿ ನೋಡಿದಡೆ ನೀವೆನ್ನ ಮನದ ಕೊನೆಯಲ್ಲಿ ತೋರುತಿರ್ಪಿರಿ: ಇದೇನು ನಿಮ್ಮ ಗಾರುಡವಯ್ಯಾ! ಅಯ್ಯಾ, ನಿಮ್ಮನೆನ್ನ ಮನದ ಕೊನೆಯಲ್ಲಿ ನೋಡಿದಡೆ ನೀವೆನ್ನ ಪಂಚಮುಖದಲ್ಲಿ ತೋರುತಿರ್ಪಿರಿ: ಇದೇನು ನಿಮ್ಮ ಗಾರುಡವಯ್ಯಾ! ಅಯ್ಯಾ, ನಿಮ್ಮನೆನ್ನ ನೆನಹಿನ ಪಂಚಮುಖದಲ್ಲಿ ನೋಡಿದಡೆ ನೀವೆನ್ನ ನವಚಕ್ರದಲ್ಲಿ ತೋರುತಿರ್ಪಿರಿ: ಇದೇನು ನಿಮ್ಮ ಗಾರುಡವಯ್ಯಾ! ಅಯ್ಯಾ, ನಿಮ್ಮನೆನ್ನ ನವಚಕ್ರದಲ್ಲಿ ನೋಡಿದಡೆ ನೀವೆನ್ನ ಸರ್ವಾಂಗದಲ್ಲಿ ತೋರುತಿರ್ಪಿರಿ: ಇದೇನು ನಿಮ್ಮ ಗಾರುಡವಯ್ಯಾ ಅಖಂಡೇಶ್ವರಾ!