ವಚನ - 1168     
 
ಗುರುಸ್ವಾಯತವಾಯಿತ್ತು, ಲಿಂಗಸ್ವಾಯತವಾಯಿತ್ತು, ಜಂಗಮಸ್ವಾಯತವಾಯಿತ್ತು ಬಸವಣ್ಣನಿಂದಲೆಂದಡೆ- ತನುವಿಲ್ಲದಿರಬೇಕು, ಮನವಿಲ್ಲದಿರಬೇಕು, ಧನವಿಲ್ಲದಿರಬೇಕು, ಅರಿವರಿತು ಮರಹು ನಷ್ಟವಾಗಿರಬೇಕು. ಗುಹೇಶ್ವರಲಿಂಗದಲ್ಲಿ. ನಿರ್ಲೇಪಿಯಾದಲ್ಲದೆ ಇಲ್ಲ ಕಾಣಾ, ಮಡಿವಾಳ ಮಾಚಯ್ಯಾ.