ವಚನ - 1167     
 
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವೆಂಬ ಈ ಚತುರ್ವಿಧಸಾಋಾಯ ಸ್ಥಲವು ಅಡಗಿತ್ತಲ್ಲಾ ನಮ್ಮ ಸಂಗನಬಸವಣ್ಣನ ಕರಸ್ಥಲದೊಳಗೆ ಅಡಗಿತ್ತಲ್ಲ! ಇನ್ನಾರಿಗಹುದೀ ಭಕ್ತಿಸ್ಥಲ? ಇನ್ನಾರಿಗೆ ಸಾರುವುದೀ ಲಿಂಗಸ್ಥಲ ಬಸವಣ್ಣಂಗಲ್ಲದೆ? ಗುಹೇಶ್ವರಾ ಸಂಗನಬಸವಣ್ಣನ ಮೊರೆಹೊಕ್ಕು ಬದುಕಿದೆನು.