Index   ವಚನ - 552    Search  
 
ಮನದಲ್ಲಿ ಒಂದು, ಮಾತಿನಲ್ಲಿ ಎರಡಾಗಿ ನುಡಿವನಲ್ಲ ಶರಣ. ನೀತಿಗೆಟ್ಟು ನಿಜವ ಬಿಟ್ಟು ನಡೆವನಲ್ಲ ಶರಣ. ಭೂತದೇಹಿಯಂತೆ ಸೋತು ಸುಖದಲ್ಲಿ ಬೀಳುವನಲ್ಲ ಶರಣ. ಜಾತಿಸೂತಕವಿಡಿದು ಹೊಡೆದಾಡಿ ಮಡಿದು ಹೋಗುವನಲ್ಲ ಶರಣ ನೋಡಾ ಅಖಂಡೇಶ್ವರಾ.