Index   ವಚನ - 572    Search  
 
ಪುರುಷನೆಂದು ಕರೆವುತಿರ್ಪುದು ಜಗದವರೆಲ್ಲ ಎನ್ನ; ನಾನು ಪುರುಷನಲ್ಲವಯ್ಯಾ. ಅದೆಂತೆಂದೊಡೆ: ಹೊರಗಣ ಸಾಕಾರವೆ ನೀನು, ಒಳಗಣ ನಿರಾಕಾರವೆ ನಾನು. ಹೊರಗಣ ಸಾಕಾರದ ಪುರುಷರೂಪೇ ನೀವಾಗಿ, ಒಳಗಣ ನಿರಾಕಾರ ಸ್ತ್ರೀರೂಪೇ ನಾನಾಗಿ, ನಿಮಗೆ ರಾಣಿವಾಸವಾದೆನಯ್ಯಾ ಅಖಂಡೇಶ್ವರಾ.