Index   ವಚನ - 614    Search  
 
ಶಿವನ ಕೂಡಿರ್ಪ ಶರಣರ ಶೀಲವನೇನೆಂಬೆನಯ್ಯಾ! ನೀರು ನೀರ, ಕ್ಷೀರವು ಕ್ಷೀರ ಬೆರೆದಂತೆ. ತನುಮನಧನಂಗಳು ಗುರುಲಿಂಗಜಂಗಮದಲ್ಲಿ ಭರಿತವಾದ ಮಹಾಶರಣರ ನೀವೇ ಬಲ್ಲಿರಯ್ಯಾ ಅಖಂಡೇಶ್ವರಾ.