Index   ವಚನ - 644    Search  
 
ಅನಾದಿ ಪರವಸ್ತುವು ತನ್ನ ಸ್ವಲೀಲಾಸ್ವಭಾವದಿಂದೆ ತಾನೇ ಅಂಗವಾದುದು, ತಾನೇ ಲಿಂಗವಾದುದು ತಾನೇ ಸಂಗವಾದುದು, ತಾನೇ ಸಮರಸವಾದುದು ಎಂಬ ಭೇದವ ನಿಮ್ಮ ಶರಣ ಬಲ್ಲನಲ್ಲದೆ ಉಳಿದ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರಯ್ಯಾ ಅಖಂಡೇಶ್ವರಾ?