Index   ವಚನ - 658    Search  
 
ನಿರುಪಮ ನಿರಾಳನು ನೋಡಾ ಲಿಂಗೈಕ್ಯನು. ನಿಸ್ಸೀಮ ನಿರ್ಜಡನು ನೋಡಾ ಲಿಂಗೈಕ್ಯನು. ನಿಃಕಳಂಕ ನಿಃಶಬ್ದನು ನೋಡಾ ಲಿಂಗೈಕ್ಯನು. ನಿರಾವರಣ ನಿರಂಜನನು ನೋಡಾ ಅಖಂಡೇಶ್ವರಾ ನಿಮ್ಮ ನಿಜಲಿಂಗೈಕ್ಯನು.